ಬೀಜದಲ್ಲಿ ಅಂಕುರವಿದ್ದಂತೆ ಏಕಡಗಿದೆ ?
ಮತ್ತೆ ಮೊಳೆದೋರಿ ಹಲವು ರೂಪಿಗೆ ಕಡೆಯಾದೆ.
ಇರಿಸಿದಲ್ಲಿ ಏಕಗುಣ, ಬಿತ್ತಿದಲ್ಲಿ ಹಲವುಗುಣದಂತಾದೆ.
ಉಭಯದ ಹೊಲಬ ತಿಳಿದು,
ಪೂರ್ವ ಉತ್ತರವೆಂಬ ಉಭಯದ ಗೊತ್ತ ಮುಟ್ಟದೆ,
ನಿಶ್ಚಯವಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bījadalli aṅkuraviddante ēkaḍagide?
Matte moḷedōri halavu rūpige kaḍeyāde.
Irisidalli ēkaguṇa, bittidalli halavuguṇadantāde.
Ubhayada holaba tiḷidu,
pūrva uttaravemba ubhayada gotta muṭṭade,
niścayavāgabēku, niḥkaḷaṅka mallikārjunā.