ಬೋಧೆನೆಯ ಬೋಧಿಸಿ ಉಂಬವರೆಲ್ಲರೂ ಸಾಧಾರಣಕ್ಕೆ ಈಡಾದರು.
ನಿರ್ಬೋಧೆಯ ಹೇಳುವ ಹಿರಿಯಲ್ಲರೂ
ಬಾಗಿಲ ಕಾಯ್ವುದಕ್ಕೊಳಗಾದರು.
ಈಜಲರಿಯದವನೊಂದಾಗಿ ಹೊಳೆಯ ಹಾಯ್ದು,
ಪ್ರಾಣಕ್ಕೆ ಆಸೆ ಮಾಡುವನಂತೆ,
ಇಷ್ಟವನರಿಯದವರ ಮಾತ ಕೇಳಿ,
ತಾ ಮುಕ್ತನಾದೆಹೆನೆಂಬ ಧೂರ್ತರ ನೋಡಾ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bōdheneya bōdhisi umbavarellarū sādhāraṇakke īḍādaru.
Nirbōdheya hēḷuva hiriyallarū
bāgila kāyvudakkoḷagādaru.
Ījalariyadavanondāgi hoḷeya hāydu,
prāṇakke āse māḍuvanante,
iṣṭavanariyadavara māta kēḷi,
tā muktanādehenemba dhūrtara nōḍā,
niḥkaḷaṅka mallikārjunā.