ಅಯ್ಯಾ! ಲಿಂಗಾಂಗ ಸಮರಸ ಹೇಗುಂಟೆಂದರೆ:
ಸುಚಿತ್ತಕಮಲ ಮೊದಲಾಗಿ
ಆಯಾಯ ಕರಸ್ಥಲದಲ್ಲಿ ಮೂರ್ತಗೊಂಡಿರುವ
ಸುಜ್ಞಾನಜಂಗಮ ಸ್ವರೂಪನಾದ
ಇಷ್ಟ ಮಹಾಲಿಂಗದ ಗರ್ಭದಲ್ಲಿ
ತನ್ನಂಗವ ಬಿಟ್ಟು;
ಎರಡು ನೇತ್ರ ಒಂದಾದ ಲಲಾಟನೇತ್ರದಲ್ಲಿ
ಇಷ್ಟಲಿಂಗವನು ಮುಳುಗಿಸುವುದೀಗ
ಲಿಂಗಾಂಗಸಂಗಸಮರಸವು ನೋಡಾ.
ಆ ಇಷ್ಟ ಮಹಾಲಿಂಗ ನೇತ್ರದರ್ಪಣದಲ್ಲಿ ಪ್ರತಿಬಿಂಬವಾಗಿ
ಮನೋನೇತ್ರಕ್ಕೆ ಒಂದೆರಡಾಗಿ
ಕಾಣಲ್ಪಡುವುದೀಗ ಪ್ರಾಣಲಿಂಗವು.
ಆ ಪ್ರಾಣಲಿಂಗಹಸ್ತಂಗಳೆಂಬ ಎರಡರಲ್ಲಿ
ನೇತ್ರದ್ವಯವೆಂಬ ಕುಚಂಗಳೆರಡ ಹಿಡಿವುದೀಗ
ಲಿಂಗಾಂಗಸಂಗಸಮರಸವು [ನೋಡಾ].
ರೂಪು ರೇಖೆವಿಭ್ರಮ ವಿಲಾಸ
ಕಳಾಲಾವಣ್ಯಸ್ವರೂಪವಾದ
ಪರಶಿವ ಬ್ರಹ್ಮಮೂರ್ತಿಯ
ಮುದ್ದು ಮುಖದ ಆಧಾರದಲ್ಲಿ
ಓಂಕಾರನಾದಾಮೃತವ ತಾ ಚುಂಬನ ಮಾಡಲ್ಕೆ
ಚಿತ್ಶಕ್ತಿಸ್ವರೂಪಮಪ್ಪ ತನ್ನ ಮುದ್ದು ಮುಖದ
ಆಧಾರದಲ್ಲಿ ಹುಟ್ಟಿದ
ನಕಾರಾದಿ ಪಂಚಪ್ರಣಮಂಗಳು,
ಆ ಪಂಚಬ್ರಹ್ಮ ಚುಂಬನವ ಮಾಡಲ್ಕೆ
ಇದು ಲಿಂಗಾಂಗ ಸಮರಸವು.
ಇದು ಶರಣಸತಿ ಲಿಂಗಪತಿ ನ್ಯಾಯವು.
ಇದು ತ್ರಿತನುವ ಲಿಂಗಕ್ಕರ್ಪಿಸುವ ಕ್ರಮವು.
ತನ್ನಲ್ಲಿ ತನ್ನ ತೋರಿ ನನ್ನಲ್ಲಿ ನನ್ನ ತೋರಿದನಾಗಿ
ನಾನು ನೀನೆಂಬುದಿಲ್ಲ ನೀನು ನಾನೆಂಬುದಿಲ್ಲ,
ತಾನೆ ತಾನಾದುದು.
ಬಯಲು ಬಯಲು ಕೂಡಿದ ಹಾಗೆ,
ಮಾತು ಮಾತ ಕಲಿವ ಹಾಗೆ
ಪರಶಿವಲಿಂಗದಲ್ಲಿ ನಿಜದೃಷ್ಟಿ ಕರಿಗೊಂಡ ಮೇಲೆ
ಗುಹ್ಯಕ್ಕೆ ಗುಹ್ಯ ಗೋಪ್ಯಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ.
ಇದ ಗುಹೇಶ್ವರನೆ ಬಲ್ಲನಲ್ಲದೆ,
ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಾ?
Hindi Translationअय्या। लिंगांगसमरस कैसे कहें तो ;
सुचित्त कमल आदि सांदर्भिक करस्थल में मूर्त बने
सुज्ञान जंगम स्वरुप इष्ट महालिंग गर्भ में
अपने अंग छोड; दो नेत्र एकत्रित ललाट नेत्र में
इष्टलिंग में तल्लीन लिंगांग संग समरस देखा।
वह इष्ट महालिंग नेत्र दर्पण में प्रतिबिंब बने
मनोनेत्र में एक दो बनकर दिखायी देनाअब प्राणलिंग
वह प्राणलिंग हस्त जैसे दो में
नेत्रद्वय जैसे दो कुचों को पकडना अब लिंगांग समरस देखा
रूपरेखा विभ्रम विलास कला लावण्य स्वरूप हुआ हरशिव ब्रह्ममूर्ति के
सुंदर मुख के आधार में ऊँकार नादामृत को खुद चुंबन करने से
चित् शक्ति स्वरूप अपने सुंदर मुख के आधार में जन्में
नकारादि पंचप्रणाम उस पंच ब्रह्म को चुंबन करने से
यह लिंगांग समरस है। यह शरण सति लिंग पति न्याय।
यह श्री तनु को लिंगार्पित करने का क्रम।
अपने आप दिखाकर मुझ में मुझे दिखा ने से
मैं तू नहीं, तू मैं नहीं जैसा भाव नहीं, खुद स्वयं हुआ।
शून्य शून्य से मिले जैसे, बोली बोल सीखने जैसे
परशिव लिंग में निजदृष्टि स्थिर होने के बाद
गुह्य का गुह्य , गोप्य का गोप्य, रहस्य का रहस्य।
इसे गुहेश्वर जाने के बिना, बुरी आँखेवाले कैसे जानते देख ?
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura