Index   ವಚನ - 574    Search  
 
ಭಕ್ತಿ ಜ್ಞಾನ ಕ್ರೀ ಮಾಡುವ ಮಾಟಂಗಳಲ್ಲಿ, ಚಿತ್ತಶುದ್ಧವಿಲ್ಲದ ಸತಿಯಾದಡೂ ಒಲ್ಲೆ, ಪುತ್ರ ಬಂಧುಗಳಾದಡೂ ಒಲ್ಲೆ. ಇಂತೀ ಇವನರಿತು ಕೂಡಿದೆನಾದಡೆ, ಎನ್ನ ಭಾವಕ್ಕೆ ಇದೆ ಭಂಗ. ಇದು ಪ್ರಸನ್ನವಪ್ಪ ಭಕ್ತಿಯ ಬೆಳೆ, ನಿಃಕಳಂಕ ಮಲ್ಲಿಕಾರ್ಜುನಾ.