ಭಾವ ತ್ರಿವಿಧ, ನಿರ್ಭಾವ ತ್ರಿವಿಧ ದಂಪತಿ ಸಂಬಂಧವಾಗಿ,
ಆರು ಸ್ಥಲವಾಯಿತ್ತು.
ಭೃತ್ಯಸ್ಥಲ ಮೂರು, ಕರ್ತೃಸ್ಥಲ ಮೂರು,
ಈರಾರು ಕೂಡಿ ನಡೆವಲ್ಲಿ ಲಕ್ಷವಾಯಿತ್ತು.
ಲಕ್ಷ ಅಲಕ್ಷವನರಿತು, ಹಿಡಿವ ಬಿಡುವ ಭಾವವೊಡಗೂಡಿದಲ್ಲಿ,
ಕಡೆ ನಡು ಮೊದಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhāva trividha, nirbhāva trividha dampati sambandhavāgi,
āru sthalavāyittu.
Bhr̥tyasthala mūru, kartr̥sthala mūru,
īrāru kūḍi naḍevalli lakṣavāyittu.
Lakṣa alakṣavanaritu, hiḍiva biḍuva bhāvavoḍagūḍidalli,
kaḍe naḍu modalilla, niḥkaḷaṅka mallikārjunā.