ಭೂಮಿಯ ಮರೆಯ ಹೇಮ, ನಾನಾ ರತ್ನಮೂಲಿಕ ದ್ರವ್ಯಂಗಳಂತೆ,
ಅಪ್ಪುವಿನ ಮರೆಯ ಷಡುವರ್ಣದ ಟಿಪ್ಪಣದಂತೆ,
ತೇಜದ ಮರೆಯ ನವಗುಣದ ಹೊಳಹಿನಂತೆ,
ವಾಯುವಿನ ಮರೆಯ ನಾನಾ ಸುಳುಹಿನಂತೆ,
ಆಕಾಶ ವಿದ್ಯುಲ್ಲತೆಯ ಗರ್ಜನೆಯ ಮೊಳಗಿನಂತೆ.
ಇಂತೀ ತದ್ರೂಪ ಹೊದ್ದದಿಹವಾದ ಕಾರಣ,
ಇಂತೀ ಆತ್ಮತತ್ವ ಭೇದದಲ್ಲಿ ಆಗುಚೇಗೆಯನರಿಯಬೇಕು.
ಆಕಾಶದ ಸೂರ್ಯ, ಹಲವು ಕುಂಭದಲ್ಲಿ ತೋರುವವೊಲು,
ಮರೆದಡೆ ಪ್ರತಿಷ್ಠೆ, ಅರಿದಡೆ ಸ್ವಯಂಭು,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhūmiya mareya hēma, nānā ratnamūlika dravyaṅgaḷante,
appuvina mareya ṣaḍuvarṇada ṭippaṇadante,
tējada mareya navaguṇada hoḷahinante,
vāyuvina mareya nānā suḷuhinante,
ākāśa vidyullateya garjaneya moḷaginante.
Intī tadrūpa hoddadihavāda kāraṇa,
intī ātmatatva bhēdadalli āgucēgeyanariyabēku.
Ākāśada sūrya, halavu kumbhadalli tōruvavolu,
maredaḍe pratiṣṭhe, aridaḍe svayambhu,
niḥkaḷaṅka mallikārjunā.