ಮಂಜಿನ ಮಡಿಕೆಯ ನೀರಿನಂತೆ,
ಮರೀಚಿಕಾಜಲದ ಹೊಳಹಿನಂತೆ,
ಅಂಬುಧಿ ತುಂಬಿದಲ್ಲಿ ಕುಡಿವ ವಡಬಾನಳನಂತೆ,
ಕಲ್ಲಿಗೆ ಸಂಭ್ರಮಿಸಿ ಹೂಸಿದ ನವನೀತದಂತೆ,
ಮತ್ತವಕ್ಕೆ ಸಂದುಸಂಶಯವುಂಟೆ ?
ಕ್ರೀಯಲ್ಲಿದ್ದು ಕ್ರೀಯನೀಂಟಿ, ಭಾವದಲ್ಲಿದ್ದು ಭಾವವನೀಂಟಿ,
ಜ್ಞಾನದಲ್ಲಿದ್ದು ಜ್ಞಾನವನೀಂಟಿ ತಾನಾಗಿದ್ದಲ್ಲಿ,
ತನ್ನನರಿದು ತನಗೆ ಅನ್ಯಭಿನ್ನವಿಲ್ಲದಲ್ಲಿ, ಸರ್ವಮಯ ಪರಿಪೂರ್ಣನಾದಲ್ಲಿ,
ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Man̄jina maḍikeya nīrinante,
marīcikājalada hoḷahinante,
ambudhi tumbidalli kuḍiva vaḍabānaḷanante,
kallige sambhramisi hūsida navanītadante,
mattavakke sandusanśayavuṇṭe?
Krīyalliddu krīyanīṇṭi, bhāvadalliddu bhāvavanīṇṭi,
jñānadalliddu jñānavanīṇṭi tānāgiddalli,
tannanaridu tanage an'yabhinnavilladalli, sarvamaya paripūrṇanādalli,
prāṇaliṅgasambandhi, niḥkaḷaṅka mallikārjunā.