ಮಜ್ಜನೆಕ್ಕೆರೆವ ಮಹಿಮರೆಲ್ಲರೂ ಭೋಗಕ್ಕೊಳಗಾದರು.
ಜ್ಞಾನವ ಹೇಳುವ ಹಿರಿಯರೆಲ್ಲರೂ ಉಂಟು, ಇಲ್ಲವೆಂಬ ಸಂದೇಹಕ್ಕೊಳಗಾದರು.
ಏನೂ ಇಲ್ಲವೆಂಬ ಜ್ಞಾನಿಗಳೆಲ್ಲರೂ ಶೂನ್ಯಕ್ಕೊಳಗಾದರು.
ಈ ಮೂರರಂದವ ಹಿಂಗಿ, ಇಂತಿವನೇನೂ ಎನ್ನದೆ,
ನಾ, ನೀನೆಂಬ ಉಭಯವನಳಿದವಂಗಲ್ಲದೆ ಲಿಂಗೈಕ್ಯವಿಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Majjanekkereva mahimarellarū bhōgakkoḷagādaru.
Jñānava hēḷuva hiriyarellarū uṇṭu, illavemba sandēhakkoḷagādaru.
Ēnū illavemba jñānigaḷellarū śūn'yakkoḷagādaru.
Ī mūrarandava hiṅgi, intivanēnū ennade,
nā, nīnemba ubhayavanaḷidavaṅgallade liṅgaikyavilla,
niḥkaḷaṅka mallikārjunā.