Index   ವಚನ - 620    Search  
 
ಮಧುರವ ಬಲ್ಲರಲ್ಲದೆ ಮಧುರ ರಸವ ಬಲ್ಲಡೆ, ಬಲ್ಲರೆಂಬೆ. ಬೆಳಗಬಲ್ಲರಲ್ಲದೆ ಬೆಳಗಿನ ಕಳೆಯನೊಳಕೊಂಡಿರ್ಪಭೇದವಬಲ್ಲಡೆ ಬಲ್ಲರೆಂಬೆ. ಸುಳುಹಿನ ಸೂಕ್ಷ್ಮವ ತಿಳುಹಿನ ವಳಯವ ತೋಳೆಡೆಯಬಲ್ಲಡೆ, ಬಲ್ಲರೆಂಬೆ. ಇವನೆಲ್ಲವನರಿಯದೆ ಸೊಲ್ಲಿನ ಮಾತಿಂಗೆ ಬಲ್ಲೆವೆಂದು ಹೋರುವ ಚೊಲ್ಲೆಹಗಾರಿಗೆಲ್ಲಿಯದೆಂದೆ, ಬಲ್ಲರ ಬಲ್ಲಹ ಭವವಿಲ್ಲದವನೆ, ನಿಃಕಳಂಕ ಮಲ್ಲಿಕಾರ್ಜುನಾ.