ಮಹಾಜಗವು ಪ್ರಳಯವಹಲ್ಲಿ, ಮಣ್ಣುಮೊರಡಿ ಕದಡಿದುದಿಲ್ಲ.
ಮಹಾಹೇತು ದಹನವಹಲ್ಲಿ, ಹುಲ್ಲುಮೆದೆ ಬೆಂದುದಿಲ್ಲ.
ಬಲ್ಲಿದರೆಲ್ಲರು ಕಾದಿ ಮಡಿವಲ್ಲಿ, ಹಂದೆ ಹುಯ್ಯಲಲಿದ್ದು ಅಂಜಿದುದಿಲ್ಲ.
ಲಿಂಗವ ಹಿಡಿದವರೆಲ್ಲರೂ ಒಂದ ಮೆಟ್ಟಿ, ಒಂದನರಿದು ಸಂಗವ ಮಾಡುವಾಗ,
ಇದರಂದವನೇನೆಂದು ಅರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Mahājagavu praḷayavahalli, maṇṇumoraḍi kadaḍidudilla.
Mahāhētu dahanavahalli, hullumede bendudilla.
Ballidarellaru kādi maḍivalli, hande huyyalaliddu an̄jidudilla.
Liṅgava hiḍidavarellarū onda meṭṭi, ondanaridu saṅgava māḍuvāga,
idarandavanēnendu ariye, niḥkaḷaṅka mallikārjunā.