ಅಯ್ಯಾ! ಸದ್ಭಕ್ತ-ಮಹೇಶ್ವರ-ಪ್ರಸಾದಿ-
ಪ್ರಾಣಲಿಂಗಿ-ಶರಣ-ಐಕ್ಯ-ನಿರಾಲಂಬಸ್ಥಲ ಮೊದಲಾದ
ಸಮಸ್ತಸ್ಥಲಂಗಳನರಿದು ಮರೆದು, ಮೇಲಾದ
ನಿರವಯಶೂನ್ಯಸ್ಥಲದಲ್ಲಿ ಪ್ರಭಾವಿಸುವ
ಮೂರ್ತಿಯ ಇರವೆಂತೆಂದಡೆ-
ಅಜ್ಞಾನಮಾಯಾಸಂಸಾರ ಪ್ರಪಂಚೆಂಬ
ಪಾಶದಲ್ಲಿ ಬಿದ್ದು ತೊಳಲುವ
ಜಡಜೀವರಿಗೆ ಮರೆಯಾಗಿ,
ಕಣ್ಣುಮನ ಭಾವಂಗಳಿಗೆ ಗೋಚರವಿಲ್ಲದೆ
ಕ್ರಿಯಾಕಾಶ-ಜ್ಞಾನಾಕಾಶ-ಭಾವಾಕಾಶ-ಪಿಂಡಾಕಾಶ-ಬಿಂದ್ವಾಕಾಶ-
ಚಿದಾಕಾಶ-ಮಹದಾಕಾಶಮಧ್ಯದಲ್ಲಿ
ಸಿಡಿಲುಮಿಂಚು ಅಭ್ರಚ್ಛಾಯೆಯಂತೆ,
ಇಕ್ಷು-ಲವಣ-ಸರ್ಪಿ-ದಧಿ-ಕ್ಷೀರ-ಘೃತ-ಸ್ವಾದೋದಕ
ಮೊದಲಾದ [ಸಪ್ತ] ಸಮುದ್ರಂಗಳಲ್ಲಿ
ಉದರಾಗ್ನಿ-ಮುಂದಾಗ್ನಿ-ಕಾಮಾಗ್ನಿಶೋಕಾಗ್ನಿ-
ವಡವಾಗ್ನಿ-ಕಾಲಾಗ್ನಿ-ಚಿದಗ್ನಿ[ಯೆಂಬ ಸಪ್ತಾಗ್ನಿ] ಇರ್ದು,
ಆ ಸಮುದ್ರಂಗಳ ಸಂಸಾರ-ಪಾಶ-ಜನ್ಮ-ಜರೆ-ಮರಣಾದಿಗಳಿಗೆ
ಹೊರಗಾಗಿ ಇರ್ಪಂತೆ,
ಶಿವಶರಣರ್ಗೆ ರೂಪಾಗಿ
ಜಡಜೀವರಿಗೆ ನಿರೂಪವಾಗಿರ್ಪುದು
ನೋಡ! ಗುಹೇಶ್ವರಲಿಂಗವು ಚೆನ್ನಬಸವಣ್ಣ.
Transliteration Ayyā! Sadbhakta-mahēśvara-prasādi-
prāṇaliṅgi-śaraṇa-aikya-nirālambasthala modalāda
samastasthalaṅgaḷanaridu maredu, mēlāda
niravayaśūn'yasthaladalli prabhāvisuva
mūrtiya iraventendaḍe-
ajñānamāyāsansāra prapan̄cemba
pāśadalli biddu toḷaluva
jaḍajīvarige mareyāgi,
kaṇṇumana bhāvaṅgaḷige gōcaravillade
kriyākāśa-jñānākāśa-bhāvākāśa-piṇḍākāśa-bindvākāśa-
cidākāśa-mahadākāśamadhyadalli
siḍilumin̄cu abhracchāyeyante,
Ikṣu-lavaṇa-sarpi-dadhi-kṣīra-ghr̥ta-svādōdaka
modalāda [sapta] samudraṅgaḷalli
udarāgni-mundāgni-kāmāgniśōkāgni-
vaḍavāgni-kālāgni-cidagni[yemba saptāgni] irdu,
ā samudraṅgaḷa sansāra-pāśa-janma-jare-maraṇādigaḷige
horagāgi irpante,
śivaśaraṇarge rūpāgi
jaḍajīvarige nirūpavāgirpudu
nōḍa! Guhēśvaraliṅgavu cennabasavaṇṇa.
Hindi Translation अय्या सद्भक्त – महेश्वर- प्रसादि
प्राण लिंगि-शरण- ऐक्य-निरालंब स्थल आदि
समस्त स्थल को जान भूलकर पारकर
निरवय शून्य स्थल में शोभायमान मूर्ति की स्थिति कै से कहेतो
अज्ञान माया संसार दुनिया जैसे पाश में गिरे तडपते
जड जीवों से दूरहोकर आँख मन भावों को बिना गोचर
क्रियाकाश- ज्ञानाकाश-भावाकाश-पिंडाकाश- बिंद्वाकाश
चिदाकाश – महदाकाश के बीच में बिजली की कौंध अशाश्वत स्थिति जैसे
इक्षु-लवण-सर्पि-दघि-क्षीर-घृत-स्वादोदक
आदि सप्त समुद्रों में
उदराग्नि- मंदाग्नि- कामाग्नि- शोकाग्नि
वडवाग्नि-कालाग्नि-चिदग्नि-रहकर
उस समुद्रों के संसार-पाशा-जन्म-जरा-मरणादियों से
बाहर रहने जैसे शिवशरणों का रूप बने जडजीवियों का निरुप हुआ है
देख गुहेश्वरलिंग चेन्नबसवण्णा।
Translated by: Eswara Sharma M and Govindarao B N