Index   ವಚನ - 629    Search  
 
ಮಹಾಮುಗಿಲಿನ ಮರೆಯ ವರುಣನ ಕಿರಣದಂತೆ, ಮಹಾನಿರ್ಮಲ ಶಿಲೆಯ ಮರೆಯಲ್ಲಿ ಬೆಳಗುವ ದೀಪ್ತಿಯಂತೆ, ಮಹಾಸುಕ್ಷೇತ್ರ ವಾಸದ ವಾಳುಕದ ಮರೆಯ ಅಪ್ಪುವಿನಂತೆ, ಇಂತೀ ದೃಷ್ಟದ ಇಷ್ಟದ ಮರೆಯಲ್ಲಿ ನಿಶ್ಚಯವ ನಿಶ್ಚಯಿಸಿದಲ್ಲಿ, ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ.