ಮಳಲ ಹಿಳಿದು ದ್ರವವ ಕಾಣಬಲ್ಲಡೆ, ಇಷ್ಟಲಿಂಗಸಂಬಂಧಿ.
ಕಲ್ಲ ಹಿಳಿದು ಮೃದುವ ಕಂಡಲ್ಲಿ, ಭಾವಲಿಂಗಸಂಬಂಧಿ.
ನೀರ ಕಡೆದು ಬೆಣ್ಣೆಯ ಮೆದ್ದಲ್ಲಿ, ಪ್ರಾಣಲಿಂಗಸಂಬಂಧಿ.
ಇಂತೀ ಇಷ್ಟ ಭಾವ ಪ್ರಾಣ ತ್ರಿವಿಧಗೂಡಿ ಏಕವಾದಲ್ಲಿ,
ಪ್ರಾಣಲಿಂಗಿಯೆಂಬ ಭಾವವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Maḷala hiḷidu dravava kāṇaballaḍe, iṣṭaliṅgasambandhi.
Kalla hiḷidu mr̥duva kaṇḍalli, bhāvaliṅgasambandhi.
Nīra kaḍedu beṇṇeya meddalli, prāṇaliṅgasambandhi.
Intī iṣṭa bhāva prāṇa trividhagūḍi ēkavādalli,
prāṇaliṅgiyemba bhāvavāyittu, niḥkaḷaṅka mallikārjunā.