Index   ವಚನ - 634    Search  
 
ಮಾಟಕೂಟವೆಂಬುದು ಮೂರರ ಒದಗಿನಾಟ. ನೀತಿ, ನಿರ್ವಾಣ, ವಿರಕ್ತಿಯೆಂಬಿವು ಮೂರು ಆತ್ಮನ ಓಟದಾಟ. ಇಂತೀ ಉಭಯದಾಟದ ಕಾಟ ಸ್ವಸ್ಥವಾಗಿ, ಭಕ್ತಂಗೆ ಸೊಪ್ಪಡಗಿ, ವಿರಕ್ತಂಗೆ ಹೆಚ್ಚುಕುಂದೆಂಬ ಉಭಯ ನಿಶ್ಚಯವಾದಲ್ಲಿ, ಆತ ನಿಃಕಳಂಕ ನಿರತ, ಸರ್ವನಿರ್ವಾಣಿ, ನಿಃಕಳಂಕ ಮಲ್ಲಿಕಾರ್ಜುನಾ.