Index   ವಚನ - 643    Search  
 
ಮಾತಿನ ಮಾಲೆಗೆ ಹೋರಲೇಕೊ, ಆತನನರಿದಿರ್ದವಂಗೆ ? ಜಗದಲ್ಲಿ ಸುಳಿವ ಭ್ರಾಂತರ ಶುದ್ಧಿಯೇಕೆ, ನಿಭ್ರಾಂತಂಗೆ ? ಅಕಳಂಕಗೇಕೆ, ಉರಿ ಸಿರಿ ಹೊರಗು, ನಿಃಕಳಂಕ ಮಲ್ಲಿಕಾರ್ಜುನಾ ?