Index   ವಚನ - 646    Search  
 
ಮಾತು ಮಾತಿನೊಳಗೇಕೆ ಆಜಾತನ ಸಂವಾದ ? ಆ ನೀತಿವಂತನೇತರೊಳಗಿದ್ದಹನೆಂಬುದನರಿಯದೆ, ಉದರಘಾತಕಕ್ಕಾಗಿ ಮಹತ್ತುಪದದಾಸೆಯ ಬಯಸಲೇಕೆ ? ಇಂತೀ ತೂತಜ್ಞಾನಿಗಳ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನ.