ಮುಂದರಿದು ಕಂಡೆಹೆನೆಂಬಾಗ, ತನು ಶಿಲೆಯ ನೆಲೆಮನೆಯೆ ?
ನಡೆದು ಕಂಡೆಹೆನೆಂಬಾಗ, ವಸ್ತು ಹೊಲದ ಹಾದಿಯೆ ?
ಇಂತೀ ಉಭಯವನರಿದು ಕಾಬುದ ಕಂಡು, ಕೇಳುವಲ್ಲಿ ಕೇಳಿ,
ಉಂಡಲ್ಲಿ ಉಂಡು, ಭಾವಿಸಿದಲ್ಲಿ ಭಾವಿಸಿ,
ಹೊಳೆಯ ದಾಟಿದ ಮತ್ತೆ ಹರುಗೋಲೇಕೆ,
ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Mundaridu kaṇḍ'̔ehenembāga, tanu śileya nelemaneye?
Naḍedu kaṇḍ'̔ehenembāga, vastu holada hādiye?
Intī ubhayavanaridu kābuda kaṇḍu, kēḷuvalli kēḷi,
uṇḍalli uṇḍu, bhāvisidalli bhāvisi,
hoḷeya dāṭida matte harugōlēke,
niḥkaḷaṅka mallikārjunā?