Index   ವಚನ - 650    Search  
 
ಮುಗಿಲ ತೆರೆಯ ಮರೆಯಲ್ಲಿ ಉರಿವ ಬೆಂಕಿಯ ಹೊಗೆಯ ಹಿಡಿದಲ್ಲಿ, ಮತ್ತೆ ಅಳಿವುದಿನ್ನೇನೊ? ಉಳಿವುದಿನ್ನೇನೊ ? ಕೆಂಡ ಕೆಟ್ಟಲ್ಲಿ ಹೊಗೆ ನಿಂದಿತ್ತು. ಅವಸಾನಕ್ಕೆ ಸಂದಿಲ್ಲ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿಃಪತಿಯಾದವಂಗೆ.