ರೂಪಿನಲ್ಲಿ ಪೂಜಿಸಿಕೊಂಬ ಲಿಂಗ, ಶಿಲೆಯ ಹಂಗು ಬಿಡದಾಗಿ,
ಮುಟ್ಟಿ ಪೂಜಿಸುವ ಭಕ್ತಂಗೆ ಭವ ಬಿಡದು.
ಭಾವದಿಂದರಿದು ಭಾವಿಸಿಹೆನೆಂದಡೆ, ಆ ಭಾವ ಕುರುಹಿಲ್ಲದೆ ಅರಿಯಬಾರದು.
ಅರಿವು ಕುರುಹ ನುಂಗಿ, ಕುರುಹು ಅರಿವಿನಲ್ಲಿ ಲೇಪವಾಗಬೇಕು.
ಲೇಪವಾದ ಮತ್ತೆ ಕುರುಹಿಗೆಯೂ ಅರಿವಿಗೂ ತೆರದರ್ಶನವಿಲ್ಲವಾಗಿ,
ಸೊಪ್ಪನೊಳಕೊಂಡ ಬಿತ್ತಿನಂತೆ, ಕರ್ಪುರವನೊಳಕೊಂಡ ಕಿಚ್ಚಿನಂತೆ,
ಚಿತ್ರವನೊಳಕೊಂಡ ಭಿತ್ತಿಯಂತೆ, ಮುತ್ತನೊಳಕೊಂಡ ನಿಜಕಾಂತಿಯಂತೆ,
ಸದ್ಭಕ್ತಿಯನೊಳಕೊಂಡ ಘನಲಿಂಗದಂತೆ.
ಹೀಂಗಲ್ಲದೆ ಪ್ರಾಣಲಿಂಗವಾಗಬಾರದು,
ಲಿಂಗಪ್ರಾಣವಾಗಬಾರದು. ಈ ದ್ವಂದ್ವವನಳಿದ ಸಂಬಂಧಿಗೆ ನಮೋ ನಮೋ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Rūpinalli pūjisikomba liṅga, śileya haṅgu biḍadāgi,
muṭṭi pūjisuva bhaktaṅge bhava biḍadu.
Bhāvadindaridu bhāvisihenendaḍe, ā bhāva kuruhillade ariyabāradu.
Arivu kuruha nuṅgi, kuruhu arivinalli lēpavāgabēku.
Lēpavāda matte kuruhigeyū arivigū teradarśanavillavāgi,
Soppanoḷakoṇḍa bittinante, karpuravanoḷakoṇḍa kiccinante,
citravanoḷakoṇḍa bhittiyante, muttanoḷakoṇḍa nijakāntiyante,
sadbhaktiyanoḷakoṇḍa ghanaliṅgadante.
Hīṅgallade prāṇaliṅgavāgabāradu,
liṅgaprāṇavāgabāradu. Ī dvandvavanaḷida sambandhige namō namō,
niḥkaḷaṅka mallikārjunā.