ಅಯ್ಯಾ! ಸಮಸ್ತಧಾನ್ಯಾದಿಗಳಲ್ಲಿ,
ಸಮಸ್ತ ಫಲಾದಿಗಳಲ್ಲಿ,
ಸಮಸ್ತಪುಷ್ಪಪತ್ರಾದಿಗಳಲ್ಲಿ
ಮಧುರ, ಒಗರು, ಕ್ಷಾರ, ಆಮ್ಲ, ಕಹಿ, ಲವಣ ಮೊದಲಾದ
ಸಮಸ್ತಪರಮಚಿದ್ರಸವಡಗಿರ್ಪಂತೆ,
ಷೋಡಶಮದಗಜದಂತರಂಗದ ಮಧ್ಯದಲ್ಲಿ
ಸಮಸ್ತ ವೈರಾಗ್ಯ, ತಿರಸ್ಕಾರಸ್ವರೂಪ
ಮಹಾ [ಅ]ಜ್ಞಾನವಡಗಿರ್ಪಂತೆ,
ಚಂದ್ರಕಾಂತದ ಶಿಲಾಮಧ್ಯದಲ್ಲಿ ಚಿಜ್ಜಲವಡಗಿರ್ಪಂತೆ,
ಶಿಶುಗಳು `ಕಂಡ ಕನಸು' ತಂದೆ ತಾಯಿಗಳಿಗೆ ಕಾಣಿಸಿದಂತೆ,
ಕರವೀರ, ಸುರಹೊನ್ನೆ, ಜಾಜಿ, ಬಕುಳ, ಪಾದರಿ, ಪಾರಿಜಾತ, ಮೊಲ್ಲೆ,
ಮಲ್ಲಿಗೆ, ತಾವರೆ, ನೈದಿಲೆ, ಸಂಪಿಗೆ, ದವನ, ಪಚ್ಚೆ, ಕಸ್ತೂರಿ,
ಮರುಗ, ಬಿಲ್ವ ಮೊದಲಾದ ಪುಷ್ಪ ಪತ್ರಾದಿಗಳಲ್ಲಿ
ಮಹಾಸದ್ವಾಸನಾ ಸ್ವರೂಪವಾದ ಪರಿಮಳವಡಗಿರ್ಪಂತೆ,
ಪ್ರಾಣ, ಅಪಾನ, ವ್ಯಾನ, ಉದಾನ,
ಸಮಾನ, ನಾಗ, ಕೂರ್ಮ,
ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳ ಮಧ್ಯದಲ್ಲಿ
ಭ್ರಮರನಾದ, ವೀಣಾನಾದ, ಘಂಟಾನಾದ,
ಭೇರಿನಾದ, ಮೇಘನಾದ,
ಪ್ರಣಮನಾದ, ದಿವ್ಯನಾದ,
ಸಿಂಹನಾದ, ಶರಭನಾದ, ಮಹಾನಾದಂಗಳಡಗಿರ್ಪಂತೆ,
ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಅಡಗಿರ್ದು,
ಜಗದ ಜಡಜೀವರಿಗೆ
ಗೋಚರವಿಲ್ಲದಿರ್ಪುದು ನೋಡ!
ಗುಹೇಶ್ವರಲಿಂಗವು, ಚೆನ್ನಬಸವಣ್ಣಾ.
Transliteration Ayyā! Samastadhān'yādigaḷalli,
samasta phalādigaḷalli,
samastapuṣpapatrādigaḷalli
madhura, ogaru, kṣāra, āmla, kahi, lavaṇa modalāda
samastaparamacidrasavaḍagirpante,
ṣōḍaśamadagajadantaraṅgada madhyadalli
samasta vairāgya, tiraskārasvarūpa
mahā [a]jñānavaḍagirpante,Candrakāntada śilāmadhyadalli cijjalavaḍagirpante,
śiśugaḷu `kaṇḍa kanasu' tande tāyigaḷige kāṇisidante,
karavīra, surahonne, jāji, bakuḷa, pādari, pārijāta, molle,
mallige, tāvare, naidile, sampige, davana, pacce, kastūri,
maruga, bilva modalāda puṣpa patrādigaḷalli
mahāsadvāsanā svarūpavāda parimaḷavaḍagirpante,
prāṇa, apāna, vyāna, udāna,
samāna, nāga, kūrma,
Kr̥kara, dēvadatta, dhanan̄jayavemba daśavāyugaḷa madhyadalli
bhramaranāda, vīṇānāda, ghaṇṭānāda,
bhērināda, mēghanāda,
praṇamanāda, divyanāda,
sinhanāda, śarabhanāda, mahānādaṅgaḷaḍagirpante,
sadbhakta śivaśaraṇagaṇaṅgaḷa madhyadalli aḍagirdu,
jagada jaḍajīvarige
gōcaravilladirpudu nōḍa!
Guhēśvaraliṅgavu, cennabasavaṇṇā
Hindi Translation अय्या, समस्त धान्यादि में, समस्त फलादि में,
समस्त पुष्प पत्रादियों में
मधुर, काढा, क्षारा, आम्ल, कसैला, लवणआदि
समस्त परम चिद्रस छिपे जैसे,
षोडश मदगज अंतरंग मध्य में
समस्त वैराग्य, तिरस्कार स्वरूप महाज्ञान में छिपे जैसे,
चंद्रकांतशिला मध्य में चिज्जल छिपे जैसे ,
करवीर, जायफूल ,मल्लिका, बकुल, पादरी, पारिजात, मोरगा,
चमे ली, कमल, कमलिनी, चंपा, दवन, पच्चे, कस्तूरी,
मरुग, बिल्व आदि पुष्प पत्रादि में
महा सद्वासना स्वरूप परिमल छिपे जैसे,
प्राण, अपान, व्यान, उदान, समान,
नाग, कूर्म, कृकर, देवदत्त, धनंजय जैसे दशवायु के बीच में
भ्रमर नाद, वीणा नाद, घंटा नाद ,भेरि नाद, मेघ नाद
प्रणम नाद, दिव्य नाद, सिंह नाद, शरभ नाद, महा नाद छिपे जैसे,
सद्भक्त शिवशरण गणों के बीच छिपे, जग के जीवियॊं को
न दिखे जैसे देख! गुहेश्वर लिंग, चेन्नबसवण्णा।
Translated by: Eswara Sharma M and Govindarao B N