ಅಯ್ಯಾ! ಸಮಸ್ತ ಆತ್ಮರು ರತಿಸಂಯೋಗದಿಂದ
ಗರ್ಭಿಣಿಯಾದಲ್ಲಿ
ಹೆಣ್ಣು ಗಂಡೆಂಬ ನಾಮ-ರೂಪ-ಕ್ರಿಯೆಗಳು
ಕಾಣಿಸಿಕೊಳ್ಳದಂತೆ,
ಬಾಲ ಶಿಶುವಿನೊಳಗೆ ಯೌವನವಡಗಿರ್ಪಂತೆ,
ಆ ಯೌವನದೊಳಗೆ ಮುಪ್ಪು ಅಡಗಿರ್ಪಂತೆ,
ಆ ಮುಪ್ಪಿನೊಳಗೆ ಜನನ-ಮರಣ-ಸ್ಥಿತಿ ಅಡಗಿರ್ಪಂತೆ,
ಆ ಜನನ ಮರಣ ಸ್ಥಿತಿಯೊಳಗೆ
ಸಕಲ ಭೋಗಂಗಳಡಗಿರ್ಪಂತೆ,
ಸರ್ವಜೀವದಯಾಪರತ್ವವುಳ್ಳ
ಸದ್ಭಕ್ತ ಶಿವಶರಣಗಣಂಗಳಲ್ಲಿ
ಮುಗಿಲ ಮರೆಯ ಸೂರ್ಯನಂತೆ,
ನೆಲದ ಮರೆಯ ನಿಧಾನದಂತೆ;
ಒರೆಯ ಮರೆಯ ಅಲಗಿನಂತೆ,
ಹಣ್ಣಿನ ಮರೆಯ ರಸದಂತೆ
ಪರಮ ಪಾವನಮೂರ್ತಿ ನಿರವಯಘನವನೊಡಗೂಡಿ
ಏಕಸ್ವರೂಪಿನಿಂದ ಗುಹೇಶ್ವರಲಿಂಗವು
ತಾನು ತಾನಾಗಿರ್ದುದನೇನೆಂಬೆನಯ್ಯ
ಚೆನ್ನಬಸವಣ್ಣ.
Hindi Translationअय्या समस्त आत्माएँ रति संयोग से गर्भिणी होतो
स्त्री पुरुष जैसे नाम –रूप-क्रिया न दीखाने जैसे ;
बाल शिशु में यौवन छिपे जैसे;
उस यौवन में बुढापा छिपे जैसे ;
उस बुढापे में जनन मरण स्थिति छिपे जैसे ;
उस जनन मरण स्थिति में सकल भोग छिपे जैसे ;
सर्व जीवदयापरत्व रहे सद्भक्त शिवशरण गणों में
बादल में छिपे सूर्य जैसे, पृथ्वी में छिपे निधान जैसे ;
म्यान में छिपे तलवार जैसे ; फल में छिपे रस जैसे ;
परम पावन मूर्ति निरवय घन से मिलकर
एक स्वरूप से गुहेश्वर लिंग अपने आप रहे को क्या कहूँ चेन्नबसवण्णा ?
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura