Index   ವಚನ - 701    Search  
 
ವಿಕಾರಿಗೇಕೊ ವ್ರತ ನೇಮ ? ವಿಶ್ವಾಸಹೀನಂಗೇಕೊ ಭಕ್ತಿಕೃತ್ಯ ? ವಂದಿಸಿ ನಿಂದಿಸುವಗೇಕೊ ಜಂಗಮಪೂಜೆ ? ಲಿಂಗವೆಂದು ಅರ್ಚಿಸಿ, ಸಂಗವನರಿಯದ ಲಿಂಗಿಗಳಿಗೆಲ್ಲಿಯದೊ ಶಿವಲಿಂಗಪೂಜೆ ? ಆರಂಗವ ತೊರೆಯದೆ, ಮೂರಂಗವ ಮೀರದೆ, ತೋರಿಪ್ಪ [ಗುಣವ] ಜರೆಯದೆ, ಅರುವತ್ತುನಾಲ್ಕು ನೇಮವನರಿವ ಪರಿ ಇನ್ನೆಂತೊ ? ಇಂತೀ ಗುಣವನರಿಯರಾಗಿ ಶೀಲವಂತರಿಗೆ ನೇಮವಿಲ್ಲ. ಪಾತಕಂಗೆ ಭಕ್ತಿಯಿಲ್ಲ, ಪೂಜೆವಂತಂಗೆ ಲಿಂಗವಿಲ್ಲ. ತ್ರಿವಿಧವ ಮರೆಯದವಂಗೆ ಜಂಗಮವಿಲ್ಲ. ಇಂತೀ ಕಾಯಜೀವದ ಬೆಸುಗೆಯ ಬಿನ್ನಾಣವನರಿಯದವಂಗೆ ಪ್ರಾಣಲಿಂಗವಿಲ್ಲ. ಇಂತಿವರಂಗ ಒಂದೂ ಇಲ್ಲದವಂಗೆ ನೀನೂ ನಾನೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.