ವಿಶ್ವಾಸದ ಹರವರಿಯಲ್ಲಿ ವಿಶ್ವಮಯ ಸ್ಥಲಕುಳಂಗಳಾದವು.
ಅದು ನಾನಾ ತಟಾಕಂಗಳಲ್ಲಿ ತೋರುವ ದಿನಕರನಂತೆ,
ಹಲವುಮಯ ತೋರುವುದಲ್ಲಿಗಲ್ಲಿಗೆ ಒಲವರವಿಲ್ಲದೆ.
ಆ ವರುಣನ ನೆಲೆ ಒಂದೆ ಹಲವು ಜಗಕ್ಕೆ ಹೊಲಬಾದಂತೆ ಸ್ಥಲಜ್ಞನಾದೆಯಲ್ಲಾ.
ಸ್ಥಲಲೇಪ ಒಂದೆಂದರಿತಲ್ಲಿ, ಏಕಸ್ಥಲಮೂರ್ತಿ ನೀನೆ.
ಏಕವು ಸಾಕೆಂದಲ್ಲಿ ನಿರಾಕಾರನಾದೆಯಲ್ಲಾ,
ನಿಃಕಳಂಕ ಮಲ್ಲಿಕಾರ್ಜುನಾ.