ಶರೀರದಲ್ಲಿ ಷಡಾಧಾರಚಕ್ರವುಂಟೆಂಬ
ಜಡೆಗಡಗಿದಲೆಯ, ಬಿಡುಗುರುಳ ಅಣ್ಣಗಳು ನೀವು ಕೇಳಿರೊ.
ಬ್ರಹ್ಮಚಕ್ರದಲ್ಲಿ ಹುಟ್ಟಿ, ವಿಷ್ಣುಚಕ್ರದಲ್ಲಿ ಬೆಳೆದು,
ರುದ್ರಚಕ್ರದಲ್ಲಿ ಸಾವುದನರಿಯದೆ, ಬಣ್ಣಬಚ್ಚನೆಯ ಮಾತ ಕಲಿತು,
ಹೊನ್ನು ಹೆಣ್ಣು ಮಣ್ಣಿಗಾಗಿ ಅನ್ನವನಿಕ್ಕುವರ
ಪ್ರಸನ್ನವ ಹಡೆಯಬಂದ ಗನ್ನಗಾರರಿಗೇಕೆ ಅರಿವಿನ ಸುದ್ದಿ?
ಆನಂದಕ್ಕತಿದೂರ, ಸ್ವಾನುಭಾವಾತ್ಮಕನೆ ಜಾಣನಾದೆಯಲ್ಲಾ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Śarīradalli ṣaḍādhāracakravuṇṭemba
jaḍegaḍagidaleya, biḍuguruḷa aṇṇagaḷu nīvu kēḷiro.
Brahmacakradalli huṭṭi, viṣṇucakradalli beḷedu,
rudracakradalli sāvudanariyade, baṇṇabaccaneya māta kalitu,
honnu heṇṇu maṇṇigāgi annavanikkuvara
prasannava haḍeyabanda gannagārarigēke arivina suddi?
Ānandakkatidūra, svānubhāvātmakane jāṇanādeyallā,
niḥkaḷaṅka mallikārjunā.