Index   ವಚನ - 720    Search  
 
ಶ್ವಾನಜ್ಞಾನಿಗಳೆಲ್ಲ ಸಮ್ಯಕ್ ಜ್ಞಾನವ ಬಲ್ಲರೆ ? ಲೌಕಿಕದ ಧ್ಯಾನಮೌನಿಗಳೆಲ್ಲ ಸ್ವಾನುಭಾವಿಗಳಹರೆ ? ಇದರ ಭಾವವನರಿಯದೆ, ಭ್ರಮೆಯೊಳಗೀ ವಸ್ತುವಿನ ಠಾವನರಿಯದೆ ವಾಯವಾಗಿ, ಇಂತೀ ಗಾವಿಲರಿಗೆಲ್ಲಿಯದೊ ಸಮ್ಯಕ್ ಜ್ಞಾನವ ಹೊಲಬು ? ಇಂತಿವ ನೀನೆ ಬಲ್ಲೆ, ನಾನರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.