Index   ವಚನ - 729    Search  
 
ಸತ್ವಕ್ಕೆ ತಕ್ಕ ಹೊರೆಯಲ್ಲದೆ, ಮತ್ತುಳಿದ ಮಾತಂಗವ ಹೊರಬಹುದೆ? ಸತ್ವಕ್ಕೆ ತಕ್ಕ ನುಡಿಯಲ್ಲದಿರ್ದಡೆ, ಆತನ ಒಚ್ಚತಗೊಂಬರೆ ಹರಶರಣರು? ನಡೆ ನುಡಿ ಸಿದ್ಧಾಂತವಲ್ಲದೆ, ಹುಡಿಗರ ಮಾತ ಸುಡು. ಎನ್ನೊಡೆಯ ಕರೆಯಾ, ನಿಃಕಳಂಕ ಮಲ್ಲಿಕಾರ್ಜುನಾ.