Index   ವಚನ - 737    Search  
 
ಸಮಾಲಕ್ಷದಲ್ಲಿ ಹುಟ್ಟಿ, ಸಕಲಕ್ರಮಗಳಿಂದ ಭೋಗಿಸಿ, ಪುಣ್ಯಪಾಪಂಗಳೆಂಬುವದನರಿಯದೆ, ಶ್ರುತಿಸ್ಮೃತಿತತ್ವಂಗಳ ತಿಳಿಯದೆ, ಅಗಮ್ಯ ಅಗೋಚರಲಿಂಗವನರಿಯದೆ, ವೃಥಾ ವೈಭವಕ್ಕೆ ಕೆಡುತ್ತಿದ್ದೀಯಲ್ಲಾ. ಅಂದು ಬಂದ ಕಥನ, ಬಸವೇಶ್ವರನಿಂದ ಬಂದ ಮಥನ, ಶುಷ್ಕಕಾಯಕದ ಯತನ, ಎನ್ನ ಸತಿಭಾವದ ಜತನ, ಭಕ್ತಿವರ್ತನದ ಸೌಖ್ಯಸಂಬಂಧ, ನಿಷ್ಠೆ ದೃಷ್ಟ ಭಕ್ತಿಜ್ಞಾನವೈರಾಗ್ಯ, ಇಂತಿವ ಹೊತ್ತಾಡಿದೆಯಲ್ಲಾ. ಇಂತೀ ಘಟ ಬಸವಣ್ಣನ ತಪ್ಪಲಲ್ಲಿ ನಿಶ್ಚಯವಾಗಿ ನಿಂದಲ್ಲದೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಕಾಣಬಾರದು.