•  
  •  
  •  
  •  
Index   ವಚನ - 820    Search  
 
ಅರಿದಡೆ ಸುಖವಿಲ್ಲ; ಮರದಡೆ ದುಃಖವಿಲ್ಲ! ಸತ್ತಡೆ ಚೇಗೆಯಿಲ್ಲ; ಬದುಕಿದಡೆ ಆಗಿಲ್ಲವೆಂಬ! ನಿರ್ಣಯದಲ್ಲಿ ನಿಶ್ಚಯಿಸಿ ನಿಲ್ಲದೆ! ನಾನು ನೀನೆಂಬ ಉಭಯವಳಿದು ಕೂಡುವ ಯೋಗದ ಹೊಲಬನರಿಯದೆ, ಬರಿಯ ಮರವೆಯ ಪ್ರೌಡಿಕೆಯಲ್ಲಿ ಕೆಟ್ಟರಯ್ಯ ಗುಹೇಶ್ವರಾ.
Transliteration Aridaḍe sukhavilla; maradaḍe duḥkhavilla! Sattaḍe cēgeyilla; badukidaḍe āgillavemba! Nirṇayadalli niścayisi nillade! Nānu nīnemba ubhayavaḷidu kūḍuva yōgada holabanariyade, bariya maraveya prauḍikeyalli keṭṭarayya guhēśvarā.
Hindi Translation जाने तो सुख नहीं, भूले तो दुःख नहीं मरे तो हानि नहीं , जिये तो हुए नहीं जैसे, निर्णय में निश्चित स्थित न खडे! मैं तू जैसे उभय मिठाकर मिलने के योग की रीति बिना जाने! सिर्फ भूल की चतुरता में बिगडे अय्या गुहेश्वरा। Translated by: Eswara Sharma M and Govindarao B N