Index   ವಚನ - 771    Search  
 
ಹಣ್ಣು ಮರನ ನುಂಗಿ ಏರುವುದಕ್ಕೆ ಠಾವಿಲ್ಲದೆ, ಹಣ್ಣನೊಡೆದು ಮರನ ಕಂಡು, ಆ ಮರದ ಹಣ್ಣ ಪರೀಕ್ಷಿಸಬಲ್ಲಡೆ, ಆತನೇ ಪರಮಸುಖಿ, ನಿಃಕಳಂಕ ಮಲ್ಲಿಕಾರ್ಜುನಾ.