ಹರಿಗೆಯ ಹಿಡಿದವ ಇದಿರ ಗೆದ್ದಿಹೆನೆಂದು
ಅದನೆದೆಗಿಕ್ಕಿಕೊಂಡು, ಉರವಣಿಸಿಕೊಂಡು,
ಬಾಹ ಸಮರವ ತರಹರಿಸಿಹೆನೆಂದು
ಇದಿರಿಗೆ ಈಡಹ ತೆರನಂತೆ ಅದಕ್ಕೇ ಹಾನಿ.
ಅಂಗದ ಕುರುಹಿನ ನೆಮ್ಮುಗೆಯಪ್ಪ ಲಿಂಗವು,
ಕಲಸಿದ ಮಣ್ಣು ರೂಹಿಂಗೆ ಈಡಾಗದೆಂದರಿದಡೆ,
ಆ ಲಿಂಗ ಭವಪಾಶವ ಗೆಲ್ಲುವುದು.
ಹಾಕಿದ ಮುಂಡಿಗೆಯ, ಭಾಷೆಯ ತಪ್ಪಿ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Harigeya hiḍidava idira geddihenendu
adanedegikkikoṇḍu, uravaṇisikoṇḍu,
bāha samarava taraharisihenendu
idirige īḍaha teranante adakkē hāni.
Aṅgada kuruhina nem'mugeyappa liṅgavu,
kalasida maṇṇu rūhiṅge īḍāgadendaridaḍe,
ā liṅga bhavapāśava gelluvudu.
Hākida muṇḍigeya, bhāṣeya tappi,
niḥkaḷaṅka mallikārjunā.