Index   ವಚನ - 775    Search  
 
ಹಲವು ಬಹುರೂಪ ಬರೆದ ಕರದ ಕಡ್ಡಿಯ ಭೇದದಂತೆ, ಮನವರಿದು, ಕಣ್ಣು ನೋಡಿ, ಕೈ ಕಡ್ಡಿಯ ಹಿಡಿದು ಲಕ್ಷಿಸುವಂತೆ, ಸ್ಥಲದಲ್ಲಿ ನಿಂದು, ಅರಿವಿನಲ್ಲಿ ಆಶ್ರಯಿಸಿ, ಇಷ್ಟ ವಿಶ್ವಾಸ ಭಕ್ತಿಯೊಳಗಡಗಿ, ಭಕ್ತಿ ವಸ್ತುವಿನಲ್ಲಿ ಲೇಪವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನಲಿಂಗ ನಿರ್ಲೆಪವಾಯಿತ್ತು.