Index   ವಚನ - 777    Search  
 
ಹಸಿದ ಹಕ್ಕಿ ಹಣ್ಣಿಂಗೆ ಹೋದಡೆ, ಹಣ್ಣು ಹಕ್ಕಿಯ ನುಂಗಿತ್ತು. ಹಣ್ಣಿನ ರಸ ಹಕ್ಕಿಯೊಳಡಗಿತ್ತು. ಹಣ್ಣು ಹಾರಿತ್ತು, ಹಕ್ಕಿ ಕೊಂಬಿನ ಮೇಲಿದ್ದಿತ್ತು. ಆ ಮರನ ಹತ್ತಲಾಗಿ, ಮರದ ಕವಲು ಹಿಸಿಯಿತ್ತು. ಹಕ್ಕಿಯಿದ್ದ ಕೊಂಬು ಹಿಡಿಯಲಾಗಿ, ಕೊಂಬು ಮುರಿಯಿತ್ತು. ಹಕ್ಕಿ ಆಕಾಶದಲಡಗಿತ್ತು. ಅಡಗಿದ ಹಕ್ಕಿಯ ತಾನುಡುಗಿಯಲ್ಲದೆ ಕಾಣಬಾರದು. ತಾನುಡುಗುವುದಕ್ಕೆ ಮುನ್ನವೆ, ಮಡದಿಯರ ನಡುವೆ ಸಿಕ್ಕಿತ್ತಯ್ಯಾ, ಆ ಮುಡುಬು. [ಆ] ಮುಡುಬನ ಬಾಯಲ್ಲಿ ಸಡಗರಿಸುತ್ತಿರ್ಪವರಾರೆಂದರಿದು ನೋಡಾ. ನರಶರೀರವ ಹೊತ್ತ ಬರುವಾಯ ಭುಂಜಕರಿಗೆ ಕರಿಗೊಂಡವನ ಸುದ್ದಿಯೇಕೊ? ಮೆಟ್ಟಿದ ಮರ[ವ]ನು, ಬಿಟ್ಟಿರ್ದ ಪಕ್ಷಿ[ಯನು] ತೊಟ್ಟಿನೊಳಗಣ ಹ[ಣ್ಣ]ನು, ತಿರುಗುವ ರಟ್ಟೆ ನುಂಗಿದುದ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಾ.