Index   ವಚನ - 783    Search  
 
ಹಿಡಿದ ಹೊಲಕ್ಕೆ ಒಡವೆಯ ಕೊಡೆನೆಂದಡೆ, ಬಿಡುವರೆ ಪೊಡವಿಯೊಡೆಯರು ? ನುಡಿದ ಮಾತಿಂಗೆ ನಡೆಯದಿದ್ದಡೆ, ಕೆಡೆನುಡಿಯದೆ ಬಿಡುವರೆ, ಲಿಂಗವನೊಡಗೂಡಿದ ಶರಣರು? ಇದಕ್ಕೆ ಪಡಿಪುಚ್ಚವಿಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.