ಹುಟ್ಟುವುದಕ್ಕೆ ಹಂಗಿಗರಾದವರೆಲ್ಲರೂ ಬ್ರಹ್ಮನ ಲೆಂಕರು.
ಸುಖವ ಮೆಚ್ಚಿ ಭೋಗಿಸುವವರೆಲ್ಲರೂ ವಿಷ್ಣುವಿನ ಲೆಂಕರು.
ನಾನಾ ರುಚಿಗೊಳಗಾಗಿ ಏನೆಂದರಿಯದೆ, ಸಾವವರೆಲ್ಲರೂ ರುದ್ರನ ಲೆಂಕರು.
ರೂಪೆಂಬೆನೆ ಆಸೆಯ ಬಣ್ಣ, ನಿರೂಪೆಂಬೆನೆ ನಾನಾ ಯೋನಿಯ ಚಿಹ್ನೆ.
ಚಿದ್ರೂಪೆಂಬೆನೆ ರುದ್ರನ ವಂಶೀಭೂತ.
ಇಂತಿವನೇನೂ ಎನ್ನದಿಪ್ಪುದೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Huṭṭuvudakke haṅgigarādavarellarū brahmana leṅkaru.
Sukhava mecci bhōgisuvavarellarū viṣṇuvina leṅkaru.
Nānā rucigoḷagāgi ēnendariyade, sāvavarellarū rudrana leṅkaru.
Rūpembene āseya baṇṇa, nirūpembene nānā yōniya cihne.
Cidrūpembene rudrana vanśībhūta.
Intivanēnū ennadippude liṅgaikya, niḥkaḷaṅka mallikārjunā.