Index   ವಚನ - 798    Search  
 
ಹೆಡೆಯಿಲ್ಲದ ಸರ್ಪ, ಫಲವಿಲ್ಲದ ವೃಕ್ಷ, ದಯವಿಲ್ಲದ ಮಾಟ, ಇಷ್ಟದ ದೃಷ್ಟವ ಕಾಣದ ಚಿತ್ತ, ಆತ್ಮನಲ್ಲಿ ಕಟ್ಟುವಡೆಯಬಲ್ಲುದೆ ? ಕ್ರೀಯಲ್ಲಿ ಆಚರಣೆ, ಆಚರಣೆಯಲ್ಲಿ ಅರಿವು ಶುದ್ಧವಾಗಿ ನಿಂದುದು, ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.