Index   ವಚನ - 807    Search  
 
ಹೊಯ್ದ ಭೇರಿಯ ನಾದ ಸಾಗಿತ್ತು ಎಲ್ಲಿಗೆ? ಅದನಾರು ಬಲ್ಲರು ವೇಧಿಸಿದ ಠಾವ? ಗುಡುಗಿನೊಳಗಣ ಗುಲುಗಡಗಿದ ಭೇದವ? ಅದು ಪೊಡವಿಯೊಳಗೋ, ಅಂಬರದಂಗವೋ? ಅದರ ಸಂಗವನಾರು ಬಲ್ಲರು? ಹೊಯ್ದ ಭೇರಿಯ ಕಾಣಬಹುದಲ್ಲದೆ, ನಾದವಡಗಿದ ಠಾವ ಭೇದಿಸಬಹುದೆ ಅಯ್ಯಾ? ಆ ಶರಣರಿರವು ನಾದಭೇದದಂತೆ, ಗುಡುಗು ಗರ್ಜನೆಯಲ್ಲಿ ಅಡಗಿದಂತೆ, ಇದನೊಡಗೂಡಬಲ್ಲಡೆ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ.