ಹೋಟಾರದಲ್ಲಿ ಒಂದು ವೇತಾಳ ಹುಟ್ಟಿತ್ತು.
ವೇತಾಳನ ಚಿತ್ತದಲ್ಲಿ ಶಿಶು ಬೆಸಲಾಗಿ, ಮಾಣಿಕ್ಯವ ಕಂಡಿತ್ತು.
ಆ ಮಾಣಿಕ್ಯದ ಬೆಳಗಿನಲ್ಲಿ ಹೋಟಾರದ ಕತ್ತಲೆ ಕೆಟ್ಟು,
ವೇತಾಳನ ಚಿತ್ತದ ಕತ್ತಲೆ ಹರಿದು,
ಶಿಶುವಿನ ಕೈಯ ರತ್ನ ಮೂರುದೆಸೆಯ ನುಂಗಿತ್ತು,
ನಿಃಕಳಂಕ ಮಲ್ಲಿಕಾರ್ಜುನನ ಸಂಗ ಸುಖದಿಂದ.
Art
Manuscript
Music
Courtesy:
Transliteration
Hōṭāradalli ondu vētāḷa huṭṭittu.
Vētāḷana cittadalli śiśu besalāgi, māṇikyava kaṇḍittu.
Ā māṇikyada beḷaginalli hōṭārada kattale keṭṭu,
vētāḷana cittada kattale haridu,
śiśuvina kaiya ratna mūrudeseya nuṅgittu,
niḥkaḷaṅka mallikārjunana saṅga sukhadinda.