Index   ವಚನ - 89    Search  
 
ಬೇಡಿಸಿಕೊಂಡು ನೀಡುವಾತ ಭಕ್ತನಲ್ಲ, ಬೇಡಿ ಉಂಬಾತ ಜಂಗಮನಲ್ಲ. ರೂಪಕ್ಕೆ ಪರಿದಾಡುವಾತ ಭಕ್ತನಲ್ಲ, ರುಚಿಗೆ ಹರಿದಾಡುವಾತ ಜಂಗಮನಲ್ಲ. ಜಂಗಮಕ್ಕೆ ಅನ್ನ ವಸ್ತ್ರವ ಕೊಟ್ಟು ಸುಖಿಸಿದೆನೆಂಬಾತ ಭಕ್ತನಲ್ಲ, ಆ ಭಕ್ತನ ಅನ್ನ ವಸ್ತ್ರದಿಂದ ನಾನು ಸುಖಿಯಾದೆನೆಂಬಾತ ಜಂಗಮನಲ್ಲ. ಅದೆಂತೆಂದೊಡೆ: ಆ ಜಂಗಮನಂತುವ ಭಕ್ತನರಿಯ, ಆ ಭಕ್ತನಂತುವ ಜಂಗಮನರಿಯದ ಕಾರಣ, ದೇವಭಕ್ತನೆಂಬ ನಾಮವಾಯಿತು. ಇಂತೀ ಉಭಯರ ಭೇದವ ನಿಮ್ಮ ಶರಣರೇ ಬಲ್ಲರಲ್ಲದೆ ಈ ಲೋಕದ ಗಾದಿಯಮನುಜರೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?