Index   ವಚನ - 153    Search  
 
ನಾನು ಪರಶಿವತತ್ವದಿಂ ಭಿನ್ನವಾಗಿ ಶಿವಕೃಪೆಯಿಂ ಮರ್ತ್ಯಲೋಕದಲ್ಲಿ ದೇಹಸಂಬಂಧಿಯಾಗಿ ಪುಟ್ಟದೇ ಮೋಹಯೆಂದು ಇರುತ್ತಿರಲು, ಎನ್ನ ಕುಲದವರೆಂದಡೆ ಜೀವಾತ್ಮರು. ಅಂತಪ್ಪ ಜೀವಾತ್ಮರು ಬಂದು ನೀನಾವ ಕುಲದವನೆಂದು ವಿಚಾರಿಸಲು ಎನ್ನ ನಿಜವ ಮರೆದು ನಾನು ಕರಿಕುಲದವನೆಂದಡೆ ನಗುವರಯ್ಯ ನಿಮ್ಮ ಶರಣರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.