Index   ವಚನ - 174    Search  
 
ಕತ್ತೆಯ ಕಟ್ಟಲಿಲ್ಲಾ, ಕತ್ತೆಯಿಲ್ಲದೆ ಅರಣ್ಯಕ್ಕೆ ಹೋಗಲಿಲ್ಲ. ಕತ್ತೆಯ ಕಾಲು ಮುರಿದು ಕಣ್ಣು ಕಳೆದು ಅಡವಿಗೆ ಹೋಗಿ, ಬೇರಿಲ್ಲದೆ ಪುಟ್ಟಿ, ಪರ್ಣ ಶಾಖೆಯಿಲ್ಲದೆ ಪಲ್ಲವಿಸದ ವೃಕ್ಷದ ಕಟ್ಟಿಗೆಯ ತಂದು ಮುಪ್ಪುರದರಸುಗಳಿಗೆ ಕೊಟ್ಟು, ಭಿಕ್ಷವ ಕೊಂಡು ಆರಿಗೂ ಕೊಡದೆ ಇರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.