Index   ವಚನ - 197    Search  
 
ಗುರುಲಿಂಗಜಂಗಮದ ಪಾದೋದಕ ಪ್ರಸಾದಪ್ರೇಮಿಗಳೆಂದು, ನುಡಿದುಕೊಂಬ ನುಡಿಯಜಾಣರಲ್ಲದೆ, ಆ ತ್ರಿಮೂರ್ತಿಗಳ ಪಾದೋದಕ ಪ್ರಸಾದವ ಸೇವಿಸಿ ಭವಹಿಂಗಿಸಲರಿಯರು. ಅದೆಂತೆಂದಡೆ : ಶುದ್ಧಪ್ರಸಾದದಿಂದ ಮರ್ತ್ಯದ ಹಂಗು ಹಿಂಗಿತ್ತು. ಸಿದ್ಧಪ್ರಸಾದದಿಂದ ಸ್ವರ್ಗದ ಹಂಗು ಹಿಂಗಿತ್ತು. ಪ್ರಸಿದ್ಧಪ್ರಸಾದದಿಂದ ಪಾತಾಳದ ಹಂಗು ಹಿಂಗಿತ್ತು. ಮಹಾಪ್ರಸಾದದಿಂದ ಹದಿನಾಲ್ಕುಲೋಕದ ಹಂಗು ಹಿಂಗಿತ್ತು. ಇಂತೀ ಪ್ರಸಾದದ ಗ್ರಾಹಕದಿಂ ಗುರು-ಲಿಂಗ-ಜಂಗಮದ ಹಂಗು ಹಿಂಗಿ, ಸತಿಪತಿಯರು ಸತ್ತು ಅವರೆಲ್ಲಿರ್ದರು ಎಂಬುದನಾರೂ ಅರಿಯರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.