Index   ವಚನ - 204    Search  
 
ಇಂತಪ್ಪ ಗುರುಶಿಷ್ಯರ ಮೇಳಾಪವ ಕಂಡು ವಿಸರ್ಜಿಸಿದೆನೆಂದು, ಬಣ್ಣದ ನುಡಿಗಳ ನುಡಿವರಯ್ಯಾ ನಿಮ್ಮ ಶರಣರ ಮುಂದೆ. ಕೇಳಯ್ಯ ಎನ್ನ ಮತ್ಪ್ರಾಣನಾಥ ಲಿಂಗತಂದೆ. ತನುವ ಮುಟ್ಟಿದಲ್ಲಿ ಅತ್ತಿಯ ಹಣ್ಣಿನಂತೆ, ಮನವ ಮುಟ್ಟಿದಲ್ಲಿ ನಸಗುನ್ನಿ ಚುರ್ಚಿಯಂತೆ, ಧನವ ಮುಟ್ಟಿದಲ್ಲಿ ಉಕ್ಕಿನ ಸಲಾಕೆಯಂತೆ, ಭಕ್ತರಲ್ಲ ಕತ್ತೆಗಳೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.