ಅವಸ್ಥೆ ಅವಸ್ಥೆಯ ಕೂಡಿ, ಬಿಂದು ನಾದವ ಕೂಡಿ,
ಕಳೆ ಕಳೆಗಳು ಒಂದಾದ ಪರಿಯ ನೋಡಾ!
ಆನೆಂಬ ಗುರುಪದ ತಾನೆಯಾದನಯ್ಯಾ ಬಸವಣ್ಣನು.
ಅಂದು ಲಿಂಗದಲನಿಮಿಷ, ಆನೆಂಬ ಗುರುಪದವಾದೆನಯ್ಯಾ.
ಹಿಂದು ಮುಂದ ಒಂದು ಮಾಡಿ ಒಂದೇ ಮೂರ್ತಿಯಾಗಿ
ಲಿಂಗ ಜಂಗಮವಾದ ಬಸವಣ್ಣನ ಪರಿಯ ನೋಡಾ!
ಗುಹೇಶ್ವರನ ಅಮಳೋಕ್ಯವಾದ ಸಂಗನಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎಂಬೆನು.
Transliteration Avasthe avastheya kūḍi, bindu nādava kūḍi,
kaḷe kaḷegaḷu ondāda pariya nōḍā!
Ānemba gurupada tāneyādanayyā basavaṇṇanu.
Andu liṅgadalanimiṣa, ānemba gurupadavādenayyā.
Hindu munda ondu māḍi ondē mūrtiyāgi
liṅga jaṅgamavāda basavaṇṇana pariya nōḍā!
Guhēśvarana amaḷōkyavāda saṅganabasavaṇṇana
śrīpādakke namō namō embenu.
Hindi Translation अवस्था अवस्था से मिलकर, बिंदु नाद से मिलकर,
कला कला से एक होने की रीति देख।
वह लिंग में अनिमिष, मैं जैसे गुरुपद हुआ अय्या।
आगे पीछे एककर मूर्ति बने
लिंग जंगम हुआ रीति देखा।
गुहेश्वर का कंठ हुआ संगनबसवण्णा के
श्रीपाद को नमो नमो कहूँगा।
Translated by: Eswara Sharma M and Govindarao B N