ಅವಸ್ಥಾತ್ರಯಮಂ ಬಿಟ್ಟು ಇಷ್ಟಲಿಂಗದ ಗರ್ಭದಲ್ಲಿ
ಕಾಯವ ನಿಕ್ಷೇಪವಂ ಮಾಡಿದ ಬಳಿಕ ಕಾಲನ ಭಯವಿಲ್ಲ.
ನೇತ್ರದಲ್ಲಿರ್ದ ಪ್ರಾಣಲಿಂಗದ ಮೇಲೆ ಮನವ ನಿಲಿಸಿದ ಬಳಿಕ
ಕಾಮನ ಭಯವಿಲ್ಲ.
ಏಕಾಂತ ಸ್ಥಾನವಾಗಿ, ಅಂತರಂಗದ ಭಾವ
ಜ್ಯೋತಿರ್ಲಿಂಗದ ಅರಿವು
ಸಂಧಾನದಿಂ ಸಮರಸವಾಗಲು, ಕರ್ಮದ ಭಯವಿಲ್ಲ.
ಈ ತ್ರಿಲಿಂಗ ಸಂಬಂಧದಿಂದ
ಕಾಲ ಕಾಮ ಕರ್ಮವನೊತ್ತಿ ಮೆಟ್ಟಿ ನಿಲ್ಲದೆ,
ವಿಷಯಸುಖಕ್ಕೆ ಮೆಚ್ಚಿ ಆ ಮೂವರ ಕಾಲ ಕೆಳಗೆ ಬಿದ್ದು,
ಮಹಾದುಃಖಕ್ಕೊಳಗಾದರು, ನರರು.
ಈ ವಿಷಯಗಾಳಿ ಸೋಂಕಲು ಹರಿ ಹತ್ತು ಭವವೆತ್ತಿದ.
ಅಜ ಇಪ್ಪತ್ತೊಂದು ಭವವೆತ್ತಿ ಶಿರ ಕಳಕೊಂಡ.
ಇಂದ್ರನ ಮೈ ಕೆಟ್ಟಿತ್ತು, ಚಂದ್ರ ಕ್ಷಯ ರೋಗಿಯಾದ.
ದಿವಸೇಂದ್ರ ಕಿರಣ ನಷ್ಟವಾದ.
ಮುನೀಂದ್ರರ್ನಷ್ಟವಾಗಿ ಮಡಿದರು.
ಮನು ಮಾಂಧಾತರು ಮಂದಮತಿಗಳಾದರು.
ದೇವ ದಾನವ ಮಾನವರು ಮಡಿದರು.
ಇದ ನೋಡಿ ನಮ್ಮ ಶರಣರು,
ವಿಷಯಗಾಳಿ ತಮ್ಮ ಸೋಕೀತೆಂದು
ಶಾಂಭವಪುರದಲ್ಲಿಯೆ ನಿಂದು,
ನಿರ್ವಿಷಯಾಸ್ತ್ರದಲ್ಲಿ ವಿಷಯಗಾಳಿಯ ಛೇದಿಸಿ ಜಯಿಸಿ
ಅಕ್ಷಯ ಸುಖಿಗಳಾದರು ನೋಡಾ, ಗುಹೇಶ್ವರಲಿಂಗದಲ್ಲಿ.
Transliteration Avasthātrayamaṁ biṭṭu iṣṭaliṅgada garbhadalli
kāyava nikṣēpavaṁ māḍida baḷika kālana bhayavilla.
Nētradallirda prāṇaliṅgada mēle manava nilisida baḷika
kāmana bhayavilla.
Ēkānta sthānavāgi, antaraṅgada bhāva
jyōtirliṅgada arivu
sandhānadiṁ samarasavāgalu, karmada bhayavilla.
Ī triliṅga sambandhadinda
Kāla kāma karmavanotti meṭṭi nillade,
viṣayasukhakke mecci ā mūvara kāla keḷage biddu,
mahāduḥkhakkoḷagādaru, nararu.
Ī viṣayagāḷi sōṅkalu hari hattu bhavavettida.
Aja ippattondu bhavavetti śira kaḷakoṇḍa.
Indrana mai keṭṭittu, candra kṣaya rōgiyāda.
Divasēndra kiraṇa naṣṭavāda.
Munīndrarnaṣṭavāgi maḍidaru.
Manu māndhātaru mandamatigaḷādaru.
Dēva dānava mānavaru maḍidaru.
Ida nōḍi nam'ma śaraṇaru,
viṣayagāḷi tam'ma sōkītendu
śāmbhavapuradalliye nindu,
nirviṣayāstradalli viṣayagāḷiya chēdisi jayisi
akṣaya sukhigaḷādaru nōḍā, guhēśvaraliṅgadalli.
Hindi Translation अवस्थात्रय को छोड़ इष्टलिंग के गर्भ में
शरीर निक्षेप करने के बाद काल का भय नहीं।
नेत्र में रहे प्राणलिंग पर मन स्थित करने के बाद काम का भय नहीं।
एकांत स्थान बनकर, अंतरंग का भाव
ज्योतिर्लिंग में ज्ञान के संधान से समरस हो तो, कर्म का भय नहीं।
इन त्रिलिंग संबंध से काल काम कर्म कुचल दबाकर खड़े न हो तो,
विषय सुख मानकर उन तीनों के पैर के नीचे गिरकर,
महा दु:ख के भाजन हुए, लोग।
यह विषयी हवालग ने से हरि दस भवों में आया
अज ने इक्कीस भव में आकर शिर खोया।
इंद्र का शरीर बिगड़ा था चंद्र क्षयरोगी बना।
सूर्य की किरणें नष्ट हुईं,
मुनींद्र नष्ट होकर मरे।
मनु मांधात मंदमति बने।
देव दानव मानव मरे।
यह देख हमारे शरण,
विषयी हवा अपने को लगे जान शांभवपुर में खड़े रहे,
निर्विषयास्त्र में विषय हवा छेदजीत
अक्षय सुखी हुए देखा, गुहेश्वरलिंग में।
Translated by: Eswara Sharma M and Govindarao B N