Index   ವಚನ - 218    Search  
 
ಮೂರಾರು ಪರ್ವತದ ಮೇಲುಗಿರಿ ಅಗ್ರದ ಕಮಲದೊಳಗೆ, ಸೂರ್ಯವರ್ಣದ ಶೇಷವು. ಆ ಶೇಷನ ವಕ್ತ್ರದೊಳಗೆ ಚಂದ್ರವರ್ಣದ ಮಂಡೂಕ. ಆ ಮಂಡೂಕನ ವಕ್ತ್ರದ ಜೊಲ್ಲು ಭೂಮಿಗೆ ಬೀಳಲು, ತಲೆಯಿಲ್ಲದ ಶೇಷ, ಸೇವಿಸಲು ತಲೆ ಬಂದು, ಕಣ್ಣು ತೆರೆದು ನೋಡಿ, ಜೊಲ್ಲಿನ ದಾರಿಯ ಪಿಡಿದು, ಎಡಬಲದ ಬಟ್ಟೆಯ ಬಿಟ್ಟು, ನಡುವಣ ಬಟ್ಟೆಯಿಂದ ಊರ್ಧ್ವಮುಖವಾಗಿ ಏರಲು, ಆ ಏರುವ ಶೇಷನ ರಭಸದಿಂ ಕತ್ತಲಿಪುರದರಸು ಮಂತ್ರಿ ಮಾರ್ಬಲವೆಲ್ಲ ಬೆದರಿ, ಶೇಷ ಮಂಡೂಕನ ಕಚ್ಚಿ, ಮಂಡೂಕ ಶೇಷನ ನುಂಗಲು, ಶೇಷ ಸತ್ತು, ಮಂಡೂಕ ಉಳಿದಿತ್ತು. ಆ ಉಳಿದ ಉಳುಮೆಯ ತಾನೇನೆಂದು ತಿಳಿದಾತನೇ ಅಸುಲಿಂಗಸಂಬಂಧಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.