ಪ್ರಾಣಲಿಂಗಿಗೆ ಪರದೈವ ಪೂಜೆಯುಂಟೆ?
ಪ್ರಾಣಲಿಂಗಿಗೆ ಪರರ ಸೇವಾವೃತ್ತಿಯುಂಟೆ?
ಪ್ರಾಣಲಿಂಗಿಗೆ ಪರಲೋಕದ ಬ್ರಹ್ಮ, ವಿಷ್ಣು,
ರುದ್ರ, ಈಶ್ವರ, ಸದಾಶಿವರೆಂಬ ಪಂಚಬ್ರಹ್ಮರು
ಮೊದಲಾದ ಅನೇಕ ದೇವತೆಗಳ
ಚತುರ್ವಿಧಫಲಪದ ಮೊದಲಾದ
ಎಂಭತ್ತೆಂಟುಕೋಟಿ ಫಲಪದದ ಮೇಲಣ ಕಾಂಕ್ಷೆಯುಂಟೆ?
ಪ್ರಾಣಲಿಂಗಿಗೆ ಮರ್ತ್ಯಲೋಕದ ಅರ್ಥೈಶ್ವರ್ಯ
ಸಕಲಸಂಪದದ ಭೋಗೋಪಭೋಗವನು
ಭೋಗಿಸಬೇಕೆಂಬ ಪುಣ್ಯದಮೇಲಣ ಮಮಕಾರವುಂಟೆ?
ಇಂತಪ್ಪ ಕರ್ಮದ ಶೇಷವನಳಿದುಳಿದಾತನೇ
ಪ್ರಾಣಲಿಂಗಿ ನೋಡೆಂದ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Prāṇaliṅgige paradaiva pūjeyuṇṭe?
Prāṇaliṅgige parara sēvāvr̥ttiyuṇṭe?
Prāṇaliṅgige paralōkada brahma, viṣṇu,
rudra, īśvara, sadāśivaremba pan̄cabrahmaru
modalāda anēka dēvategaḷa
caturvidhaphalapada modalāda
embhatteṇṭukōṭi phalapadada mēlaṇa kāṅkṣeyuṇṭe?
Prāṇaliṅgige martyalōkada arthaiśvarya
sakalasampadada bhōgōpabhōgavanu
bhōgisabēkemba puṇyadamēlaṇa mamakāravuṇṭe?
Intappa karmada śēṣavanaḷiduḷidātanē
prāṇaliṅgi nōḍenda
kāḍanoḷagāda śaṅkarapriya cannakadambaliṅga
nirmāyaprabhuve.