Index   ವಚನ - 246    Search  
 
ವಿರಕ್ತನಾದೆನೆಂಬರು, ವಿರಕ್ತನ ಬಗೆಯ ಪೇಳ್ವೆ. ವಿರಕ್ತನಾದಡೆ ಮನೆಯ ಹೊಂದಿ ಎಲ್ಲರಲ್ಲಿ ಇರಲಾಗದು. ವಿರಕ್ತನಾದಡೆ ಊರನಾಶ್ರಯಿಸಿ ಮನೆಮನೆಯ ತಿರುಗಿ ಭಿಕ್ಷವ ಬೇಡಲಾಗದು. ವಿರಕ್ತನಾದಡೆ ದೇಶ ಬಿಟ್ಟು ಪರದೇಶಕ್ಕೆ ಹೋಗಲಾಗದು. ವಿರಕ್ತನಾದಡೆ ಅರಣ್ಯಪರ್ವತದಲ್ಲಿರಲಾಗದು. ವಿರಕ್ತನಾದಡೆ ಮೇರುಪರ್ವತದ ಕಮಲಸರೋವರದಲ್ಲಿರಲಾಗದು. ವಿರಕ್ತನಾದಡೆ ಊರೂರು ತಿರುಗಲಾಗದು. ಪುಣ್ಯದೇಶಕ್ಕೆ ಹೋಗಲಾಗದು. ಇಂತಿಲ್ಲದಿರಬಲ್ಲರೆ ವಿರಕ್ತನೆಂಬೆನಯ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.