Index   ವಚನ - 289    Search  
 
ಮೂರುದಿಬ್ಬದ ಅರಣ್ಯದಲ್ಲಿ ಚರಿಸುವ ಕುರಿತಂಡನು ಕೊಳಲ ಧ್ವನಿಯಿಂದ ದ್ವದ್ವಿಯ ಹೊಡೆದು ತಪ್ಪೆಜ್ಜಿಯನಿಕ್ಕಿ ನಡೆಸುತ್ತ ತಂದು, ಮೂರುಸುತ್ತಿನ ಹಟ್ಟಿಯೊಳಗೆ ತರುಬಿ ಕುನ್ನಿಯ ಬಿಟ್ಟು, ಜಾವಲಿಯ ಕಟ್ಟಿ, ವೀರಬೀರೇಶ್ವರಲಿಂಗಕ್ಕೆ ಜಗ್ಗನಿಕ್ಕಿ ಕಾಯಕವ ಮಾಡುತಿರ್ದರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.