Index   ವಚನ - 292    Search  
 
ಮೂರು ಸುತ್ತಿನ ಹಟ್ಟಿಯ ಸುಟ್ಟು ಕುರಿಯ ತಂಡನು ಹೊಡೆದು, ವೀರಬೀರೇಶ್ವರಲಿಂಗಕ್ಕೆ ಹಬ್ಬವಮಾಡಿ, ಆರು ಸುತ್ತಿನ ಹಟ್ಟಿಯ ಕುರಿ ಕೊಲ್ಲದೆ ಕೊಂದು ಹಾಲ ಕುಡಿದು ಮಲೆಯೊಳಡಗಿ ಮಲೆಯ ತಿಂದು, ಮೂರುಮಂದಿ ವೀರಗಾರರ ಕೊಂದು, ಶಸ್ತ್ರವ ಮುರಿದು ಶಸ್ತ್ರವ ಪಿಡಿದು ಕುಣಿಕುಣಿದಾಡಿ, ಕಾಯಕವ ಮಾಡಿ ಡೊಳ್ಳುಹೊಡೆದು ಡಂಗಿಯ ಗೂಡಿಗೆ ಹೋಗಬೇಕಣ್ಣ ಬೀರರೆಲ್ಲ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.