Index   ವಚನ - 310    Search  
 
ಮರಿದುಂಬಿ ಮರದ ಮೂಲಗೂಡಿನಲ್ಲಿರುವ ಕರಿಕಾಗಿಪುಚ್ಚದ ಗಾಳಿಯಲ್ಲಿ ಮೂರುಲೋಕ ಅಳಿಯುವುದ ಕಂಡೆ. ಗರ್ಭದಲ್ಲಿ ಹಲವು ಲೋಕದ ಪ್ರಾಣಿಗಳ ಶಿರದಲ್ಲಿ ಮಾಣಿಕ ಇರುವುದ ಕಂಡೆ. ಗಾಳಿಯ ನಿಲ್ಲಿಸಿ ಪುಚ್ಚತೆರೆದು, ಹೊಟ್ಟೆಯೊಡೆದು, ಹಕ್ಕಿಯ ಕೊಂದು ಶಿರವ ಛೇದಿಸಿದಲ್ಲದೆ, ಆ ಮಾಣಿಕವು ಆರಿಗೂ ಸಾಧ್ಯವಾಗದು. ಆ ಮಾಣಿಕವು ಸಾಧ್ಯವಾಗದಿರ್ದಡೆ ಭವಹಿಂಗದು ಮುಕ್ತಿದೋರದು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.